Wednesday, April 22, 2015

ಈತ ನನ್ನ ತನುಜನಾ ಅಥವಾ ಜನಕನಾ?

ಈತ ನನ್ನ ತನುಜನಾ ಅಥವಾ ಜನಕನಾ?
ಈ ನನ್ನ ಮನದಲ್ಲಿ ನಿರಂತರ ಮಂಥನ

ಒಂದು ವಸಂತದ ಹಿಂದೆ ಸುದಿನ..
ಒಡಲಿಂದ ಮಡಿಲಿಗೆ ಕಂದನ ಆಗಮನ

ಹೃದಯ ಸಾಗರದಿ ಅನಂತ ತರಂಗಗಳ ಸಂಚಲನ..
ಅಂತರಂಗದಲಿ ಮೃದಂಗ ವಾದನ

ಮೂಡಿದೆ ಎದೆಯ ಬಾಂದಳದಲ್ಲಿ 
ಸಪ್ತವರ್ಣದ ಕಾಮನಬಿಲ್ಲ ರಂಗವಲ್ಲಿ

ಕೋಟಿ ಜನಸ್ತೋಮದಲಿ ಕಳೆದುಹೋದ ನನ್ನ..
ಕಂದ ಮಾಡಿದ ಕೋಟಿಗೊಬ್ಬಳನ್ನ

ನಾನಗಿದ್ದೆ ರೆಕ್ಕೆ ಕತ್ತರಿಸಲ್ಪಟ್ಟ ಜಟಾಯು..
ಫೀನಿಕ್ಸ್ ಪಕ್ಷಿಯ ಹಾಗೆ ಪಡೆದೆ ಮರುಹುಟ್ಟನ್ನ

ಈತ ನನ್ನ ತನುಜನಾ ಅಥವಾ ಜನಕನಾ?
ಈ ನನ್ನ ಮನದಲ್ಲಿ ನಿರಂತರ ಮಂಥನ




No comments:

Post a Comment