Wednesday, April 22, 2015

ಬಾ ಮರಳಿ ಮಲೆನಾಡಿನ ತೇರಿಗೆ.. ನಿನ್ನೂರಿಗೆ



ಬಾ ಮರಳಿ ಮಲೆನಾಡಿನ ತೇರಿಗೆ.. ನಿನ್ನೂರಿಗೆ

ಪಟ್ಟಣವು ಗೋಳು.. ಹಳ್ಳಿಯದು ಸುಖಬಾಳು.. 
ಕುವೆಂಪುರವರು ಉಸುರಿದ ಬಂಗಾರದಂತ ಮಾತು..

ಮಲೆಸೀಮೆಯ ಮುಂಜಾವಿನ ಅಸಂಖ್ಯಾತ ಖಗ ಕಲರವ 
ರವಿ ಹೊದ್ದು ಮಲಗಿದರೂ ನಿಲ್ಲದ ಪೇಟೆಯ ರವರವ

ನನ್ನೂರಿನ ಭವ್ಯ ಸೂರ್ಯೋದಯವನು ತುಂಬಿಕೊಂಡವು ನೇತ್ರ 
ಸೂರ್ಯಾಸ್ತ ಸವಿಯಲು ಪೇಟೆ ಜನ ಹೋಗುವರು ನಂದಿ ಬೆಟ್ಟದ ಹತ್ರ

ಹಳ್ಳಿಯಲಿ ಪೂರ್ಣ ಚಂದಿರ ಆಹಾ ಎಷ್ಟು ಅಂದ
ಪೇಟೆಯ ಕಂದ - ಅಮ್ಮಾ ಚಂದ್ರ ಅಂದರೆ ಏನಂದ?

ಅಜ್ಜಿ ಮನೆಯ ಸೌದೆ ಒಲೆ ಹೊಮ್ಮಿಸುವ ಹಿತವಾದ ಘಾಟು..
ನಗರದಲಿ ಎಲ್ಲೆಲ್ಲೂ ಚಿತಾಭಸ್ಮದಂತ ಸಿಮೆಂಟು, ಸಿಮೆಂಟು

ಹೇಳುವರು ಮಲೆನಾಡ ಹೆಣ್ಣ ಮೈಬಣ್ಣ ಬಲು ಚನ್ನ 
ಇಲ್ಲಿ ಹೆಂಗಳೆಯರು ಹೋಗುವರು ಸೌಂದರ್ಯ ಪ್ರಸಾದನಗಳ ಮೊರೆಯನ್ನ

ಅಲ್ಲಿ ಕಿರುಗಾಸು ಗಳಿಸದೆಯೂ ದೊರೆಯುತಿತ್ತು ಆನಂದ 
ಗಾಂಧಿ ಮೊಗದ ಕಾಗದ ಗಳಿಕೆಯಲ್ಲಿ ಅಳಿಯುತಿದೆ ಜೀವನದ ಚಂದ

ತೀವ್ರವಾಗಿ ಹೇಳುತಿದೆ ನನ್ನ ಹೃದಯ ದೀವಿಗೆ.. 
ಬಾ ಮರಳಿ ಮಲೆನಾಡಿನ ತೇರಿಗೆ.. ನಿನ್ನೂರಿಗೆ..

No comments:

Post a Comment