ಮನಸಿನ ಲಹರಿಯನ್ನ ಪುಟ್ಟ
ಕಲ್ಲೊಂದು ಕೆಣಕಿದೆ
ಇಂದು ನಿನಗೇನಾಯಿತೆಂದು ಎನ್ನ
ಕೇಳುತಿದೆ
ಹುಟ್ಟುಹಬ್ಬ ಎಂದು ಮಾರ್ಚಿ
ತಿಂಗಳ ಶುರುವಿನಿoದ
ಇರುತ್ತಿದ್ದ ಉತ್ಸಾಹ ಎಲ್ಲಿ
ಹೋಯಿತೆಂದು ?
ಐವತ್ತು ಪೈಸೆಯ ಅರವತ್ತು
ಚಾಕಲೇಟುಗಳು
ಅಪ್ಪನೊಡನೆ ಕೊಂಡು ತಂದ ಆ
ದಿನಗಳು
ಹೊಸ ಬಟ್ಟೆ ಮ್ಯಾಚಿಂಗ್
ಬಳೆಗಳು
ಅಮ್ಮ ಮಾಡಿದ ಸಿಹಿ
ತಿನಿಸುಗಳು
ರವಿ ಮೂಡಿದರೆ ನನ್ನ ದಿನ ಎಂಬ
ಹುರುಪಿಂದ
ನಿದ್ದೆ ಇಲ್ಲದೆ ಕಳೆದ
ಇರುಳುಗಳು
ಯಾವ ಸ್ನೇಹಿತರು ಮೊದಲು
ಹಾರೈಸುವರೆಂದು
ಮಾಡಿದ ಕುರುಡು ಊಹೆಗಳು
ವರುಷಗಳು ಉರುಳಿದಂತೆ ಮಾಸುತಿದೆ
ಹುರುಪು
ಕಾಡುತಿದೆ ಬಾಲ್ಯದ ಸವಿ ಸವಿ ನೆನಪು
ಮನಸಿನ ಲಹರಿಯನ್ನ ಪುಟ್ಟ
ಕಲ್ಲೊಂದು ಕೆಣಕಿದೆ
ಇಂದು ನಿನಗೇನಾಯಿತೆಂದು ಎನ್ನ
ಕೇಳುತಿದೆ
👍👍
ReplyDeleteIam very much impressed with your poem
ReplyDeleteತುಂಬಾ ಜನರ ಮನದಾಳದ ಮಾತು ನವ್ಯವ್ರೆ
ReplyDeleteNice...liked it. Keep writing.
ReplyDelete