Friday, April 24, 2015

ನೀ ನನ್ನ ಬಸಿರು.. ನೀ ನನ್ನ ಉಸಿರು

ನೀ ನನ್ನ ಬಸಿರು.. ನೀ ನನ್ನ ಉಸಿರು
ನೀ ನನ್ನ ಕನಸು.. ನೀ ನನ್ನ ನನಸು
ನೀ ನನ್ನ ನುಡಿ.. ನೀ ನನ್ನ ನಡೆ
ನೀ ನನ್ನ ಜೀವ.. ನೀ ನನ್ನ ಭಾವ

ನಾ ಕುಡಿಯುವ ನೀರ ತುಂಬಾ
ಮುದ್ದು ಕಂದ ನಿನ್ನದೇ ಬಿಂಬ
ಉಣ್ಣುವ ಕುಸುಬಲಕ್ಕಿ ಗಂಜಿ  ಅನ್ನ
ನಿನ್ನ ನೆನಪಿಂದಾಗಿದೆ ಮೃಷ್ಟಾನ್ನ

ಅಜ್ಜಿ ಕಥೆಯ ಒಂದಾನೊಂದು ಕಾಲದ ಜಾದೂಗಾರ
ಇಡುತ್ತಿದ್ದ ತನ್ನ ಜೀವವ ಪಂಜರದ ಗಿಳಿಯ ಹತ್ತಿರ
ಅದೇ ರೀತಿ ಎನ್ನ ಎದೆಗೂಡಾಗಿದೆ ಹೃದಯವಿಲ್ಲದೆ ಖಾಲಿ
ಇರುವುದದು ನನ್ನ ಪುಟ್ಟ ಗೆಣೆಕಾರನ ಬಳಿಯಲ್ಲಿ

ನನ್ನ ಭೂತ, ವರ್ತಮಾನ, ಭವಿಷ್ಯ
ಇವನೇ ಎಂಬುದು ನೂರಕ್ಕೆ ನೂರು ಸತ್ಯ
ನನ್ನ ರಕ್ತನಾಡಿಯಲಿ ಸ್ಥಗಿತವಾದ ನೆತ್ತರ ಸಂಚಾರ
ಆರಂಭವಾಗುವುದು ಕೇಳಿದಾಗ 'ವರ್ಯ' ಎಂಬ ಹೆಸರ

ಎಲ್ಲಕ್ಕೂ ಮಿಗಿಲಾಗಿ ನನ್ನ ನಾಮಧೇಯದಲ್ಲೂ
ಚಿನ್ನಾ.. ನೀನೇ ಸೇರಿಕೊಂಡೆಯಲ್ಲೋ


7 comments:

  1. ಅಭಿಜ್ಞಾನನಿಗೆ ಶಕುಂತಲ ಸಿಕ್ಕ ಖುಷಿಯಲ್ಲಿ ಆತನಿಗಾಗಿ ಒಂದಷ್ಟು ಗೀಚಿದರೆ ನಮಗೆ ತೊಚದಾರದಷ್ಟು ಸಂತೋಷ :)

    ReplyDelete
    Replies
    1. ಗಿರಿ... ಖಂಡಿತ ಪ್ರಯತ್ನಿಸ್ತೀನಿ :)

      Delete